Organized by Yellow & Red
Technical Partner Yellow & Red

CAUSE

Old age orphan run

Radhamani.H & Ramya Nagaraj

YARF Volunteers
(Volunteers are our key part of survival)



ಸ್ವಲ್ಪ ದೂರ ಸಾಗುತ್ತಿದ್ದೇವೆ

ಮರಗಿಡಗಳನ್ನು ನೆಟ್ಟು ಪರಿಸರವನ್ನು ಭೂಮಿಯನ್ನು ಹಸಿರಾಗಿಸಿ

ಶೂನ ದಾರವನ್ನು ಕಟ್ಟಿ ಸುಂದರ ಪ್ರಕೃತಿ ದೃಶ್ಯಗಳ ವಾತಾವರಣದ ಜೊತೆ ರಾಮನಗರದ ಬೆಟ್ಟದವರೆಗೂ ಓಡಲು ತಯಾರಾಗಿ. ೨೦೨೦ ನೆ ಸಾಲಿನಲ್ಲಿ ಹಳದಿ ಮತ್ತು ಕೆಂಪು ಬಣ್ಣದ ತಂಡವು ರಾಮನಗರದವರೆಗೆ ಸುಧೀರ್ಘ ಓಟವನ್ನು ಸಂಘಟನೆ ಮಾಡಿದೆ.

ಪ್ಲಾಸ್ಟಿಕ್ ಅರಣ್ಯ ಕೃಷಿಗೆ ತುಂಬಾ ಅಪಾಯಕಾರಿ ಎಂಬುದರ ಬಗ್ಗೆ ಸೃಜನಾತ್ಮಕ ಅರಿವು ಮೂಡಿಸಲು ಈ ಓಟದ ಪಂದ್ಯವನ್ನು ಏರ್ಪಡಿಸಲಾಗಿದೆ. ಈ ಸ್ಥಳದಲ್ಲಿ ಎಲ್ಲಾ ರೀತಿಯ ವಾತಾವರಣದ ಮುಖಗಳನ್ನು ನೋಡಬಹುದು. ಊದಾ :- ಟರ್ ಮ್ಯಾಕ್ ರಸ್ತೆ ಮಣ್ಣಿನ ರಸ್ತೆ, ಹಳ್ಳಿಯ ದಾರಿಗಳು ಬೆಟ್ಟಗಳು, ಭತ್ತ ಮತ್ತು ಮಾವಿನ ತೋಪುಗಳು ಕಲ್ಲಿನ ಭೂಪ್ರದೇಶಗಳು.


ಓಟದ ಸ್ಪರ್ಧೆಯ ಕಾರಣಗಳು

ರಾಮನಗರದ ಸುಧೀರ್ಘ ಓಟದ ಅಂತರ ೨೧.೧ ಕಿ.ಮೀ ದೂರವಿದೆ ಈ ಸಂಘಟನೆಯಲ್ಲಿ ಎಲ್ಲರಿಗೂ ಎಲ್ಲಾ ರೀತಿಯ ಅನುಕೂಲಗಳಿವೆ. ಈಗಾಗಲೇ ಇಂತಹ ಸಂಘಟನೆಯಲ್ಲಿ ಅನುಭವವಿರುವವರು ಮತ್ತು ಅನುಭವವಿಲ್ಲದವರಿಗೂ ಸಹ ಇದರ ಬಗ್ಗೆ ಅರಿವು ಮೂಡುತ್ತದೆ.

೪ ಗಂಟೆಗಳ ಕಾಲ ನಡೆಯುವ ಈ ಓಟ ಯಾವುದೇ ರೀತಿಯ ಕಾಲಾಹರಣವಾಗುವುದಿಲ್ಲ. ಇದು ಒಂದು ತುಂಬಾ ಯಶಸ್ಸಿನ ದಿನವಾಗಿರುತ್ತದೆ.



ಅರಣ್ಯ ಕೃಷಿ ಎಂದರೇನು

ಅರಣ್ಯ ಕೃಷಿ ಎಂದರೆ ಕೃಷಿಯ ಒಂದು ಭಾಗ ಇದರಲ್ಲಿ ಮರಗಿಡಗಳನ್ನು ನೆಡುವುದು, ಬೇಸಾಯ, ಮರಗಿಡಗಳ ರಕ್ಷಣೆ, ಬೆಳೆಬೆಳೆಯುವುದು, ಜಾನುವಾರುಗಳ ಸಾಕಾಣಿಕೆ. ಇದು ಭೂಪ್ರದೇಶವನ್ನು ಯಾವ ರೀತಿ ಉಪಯೋಗಿಸಬೇಕೆಂಬುದರ ಮಾದರಿಯಾಗಿದೆ. ಹಾಗೆಯೇ ಆರ್ಥಿಕವಾಗಿ, ಸಮಾಜಿಕವಾಗಿ, ಪರಿಸರ ರಕ್ಷಣೆಯಲ್ಲಿಯೂ ತುಂಬಾ ಪ್ರಯೋಜನಕಾರಿಯಾಗಿದೆ.

ಅರಣ್ಯ ಕೃಷಿ ಮಾಡುವ ಪ್ರದೇಶ

  • ಟೆರೆಸ್ ರೈಸರ್ಸ ಮೇಲೆ ಅರಣ್ಯ ಕೃಷಿಯನ್ನು ಮಾಡಬಹುದು.
  • ಕೃಷಿ ಗಡಿಗಳು
  • ಮಾರ್ಗದ ಅಂಚುಗಳಲ್ಲಿ ಬೆಳೆಯಬಹುದು.
  • ಭೂ ಪ್ರದೇಶದ ಜಾಗಗಳ ಅನುಸಾರವಾಗಿ ಬೆಳೆಯಬಹುದು.

ಅರಣ್ಯ ಕೃಷಿಯಿಂದಾಗುವ ಉಪಯೋಗಗಳು


  • ಅರಣ್ಯ ಕೃಷಿಯಿಂದ ಜಾನುವಾರುಗಳಿಗೆ ಮೇವು, ಓಲೆ ಉರಿಸಲು, ಸೌದೆ ಮರದ ತುಂಡುಗಳು ಹಣ್ಣುಗಳು, ಗಿಡಮೂಲಿಕೆಗಳು ಮುಂತಾದವುಗಳನ್ನು ಬೆಳೆಯಬಹುದು.
  • ಜಾನುವಾರುಗಳ ಸಾಕಾಣಿಕೆಗೆ ಈ ಕೃಷಿ ತುಂಬಾ ಅವಶ್ಯಕ.
  • ಮಳೆಯಿಂದಾಗುವ ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು ಒಣಗಿದ ಎಲೆಗಳು ಮತ್ತು ಉದುರಿದ ಎಲೆಗಳು ಗೊಬ್ಬರವಾಗುತ್ತವೆ.
  • ಈ ವ್ಯವಸಾಯದಿಂದ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ.
  • ಮರಗಳು ಮಣ್ಣಿನ ಸವಕಳಿಯನ್ನು ತಪ್ಪಿಸುತ್ತವೆ ಹಾಗೆಯೇ ಮಣ್ಣು ಮರಗಳಿಗೆ ಪೋಷಕಾಂಶವನ್ನು ನೀಡುತ್ತದೆ. ಈ ಸರಪಳಿಯಿಂದ ಮಣ್ಣಿನ ಮಣ್ಣಿನ ಜೀವನ ಮಾತ್ತು ಅದರಲ್ಲಿರುವ ಉಳುಗಳ ರಕ್ಷಣೆಯಾಗುತ್ತದೆ.

ಕೃಷಿ ಅರಣ್ಯದಿಂದಾಗುವ ಪ್ರಭಾವಗಳನ್ನು ಹೆಚ್ಚು ಮಾಡುವ ವಿಧಾನಗಳು

  • ಕೃಷಿ ಕ್ಷೇತ್ರ ಭಾರತದ ಜಿ.ಡಿ.ಪಿ ಗೆ ಶೇಕಡ ೧೭% ರಷ್ಟು ಕೊಡುಗೆ ನೀಡುತ್ತದೆ, ಶೇಕಡ ೫೦% ರಷ್ಟು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ.
  • ರ್ಯಾಲಿ ಫಾರ್ ರಿವರ್ಸ ( ನದಿಗಳ ರಕ್ಷಣೆ ) ಎಂಬ ರ್ಯಾಲಿಯನ್ನು ಪ್ರಾರಂಭಿಸಿದವರು ಸದ್ಗುರು. ಇದರ ಗುರಿ ರೈತರನ್ನು ಅಲ್ಪಸ್ವಲ್ಪ ಅರಣ್ಯ ಕೃಷಿಗೆ ಒಳಪಡಿಸುವುದರಿಂದ ಅವರು ಅನುಭವಿಸುತ್ತಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
  • ಕಾವೇರಿ ಕೂಗಿನ ಅಭಿಪ್ರಾಯವೇನೆಂದರೆ ಅರಣ್ಯ ಕೃಷಿಯಿಂದ ಮಣ್ಣು ಮತ್ತು ನದಿಗಳ (ಕಾವೇರಿ) ನಾಶದ ಬಿಕ್ಕಟ್ಟಿನಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಬಹುದು.

ಭಾರತದಿಂದ ರಫ್ತಾಗುತ್ತಿರುವ ಅರಣ್ಯ ಕೃಷಿಯ ಉತ್ಪನ್ನಗಳು

  • ಎಳ್ಳು, ಆಹಾರದ ಉತ್ಪನ್ನಗಳು, ಆಯುರ್ವೇದದ ಉತ್ಪನ್ನಗಳು.
  • ಭಾರತ ೨೦೧೭ -೨೦೧೮ ರಲ್ಲಿ ೪೬೩.೯೦ ಮಿಲಿಯನ್ ನಷ್ಟು ಮೊತ್ತದ ಎಳ್ಳನ್ನು ರಫ್ತು ಮಾಡಲಾಯಿತು. ಏಪ್ರಿಲ್ ೨೦೧೮ ೩೨೯.೬೦ ಮಿಲಿಯನ್ ನಷ್ಟು ಮೊತ್ತದ ಎಳ್ಳನ್ನು ರಫ್ತು ಮಾದಲಾಯಿತು.
  • ಗೌರ್ ಗಮ್ :- ಭಾರತ ೨೦೧೭-೧೮ ೬೪೬.೯೪ ಮಿಲಿಯನ್ ನಷ್ಟು, ಏಪ್ರಿಲ್ ೨೦೧೮ ರಲ್ಲಿ ೪೦೧.೦೧ ಮಿಲಿಯನ್ ನಷ್ಟು ರಫ್ತು ಮಾಡಿತು.
  • ಶೆಲಾಕ್ :- ಭಾರತ ೨೦೧೭-೨೦೧೮ ರಲ್ಲಿ ೪೪.೫೩ ಮಿಲಿಯನ್ ನಷ್ಟು, ಏಪ್ರಿಲ್ ೨೦೧೮ ೨೪.೯೪ ಮಿಲಿಯನ್ ಮೊತ್ತದಷ್ಟು ಶೆಲಾಕ್ ನ್ನು ರಫ್ತು ಮಾಡಿತು.
  • ಟೆಂಡು ಲೀಫ್ :- ಭಾರತ ೨೦೧೭-೨೦೧೮ ರಲ್ಲಿ ೯.೪೯ ಮಿಲಿಯನ್ ಮೊತ್ತದಷ್ಟನ್ನು, ಏಪ್ರಿಲ್ ೨೦೧೮ ರಲ್ಲಿ ೩.೫೫ ಮಿಲಿಯನ್ ಮೊತ್ತದಷ್ಟನ್ನು ರಫ್ತು ಮಾಡಲಾಯಿತು.
  • ಬಿದಿರಿನ ಬುಟ್ಟಿಗಳು ಮತ್ತು ಬಿದಿರಿನ ಬಾಟಲಿಗಳು :- ಭಾರತ ೨೦೧೭-೨೦೧೮ ರಲ್ಲಿ ೦.೫೫ ಮಿಲಿಯನ್ ಮತ್ತು ೦.೪೨ ಮಿಲಿಯನ್ ಏಪ್ರಿಲ್ ೨೦೧೮ ರಲ್ಲಿ ರಫ್ತು ಮಾಡುವ ಹಂತವನ್ನು ತಲುಪಿತು.

Our slots are full and participation registration is closed.

Sorry to those friends who missed..

List Price: Rs.999.0
Our Price: Rs.849.0
Buy from FlipKart
Copyrights © 2024, Yellow and Red -All rights are reserved  | Terms and Conditions | Sitemap | Contact Us
facebook twitter

Copyrights © 2013 - 2024, All Rights Reserved  

Colored By -
Top ↑