Organized by Yellow & Red
Technical Partner Yellow & Red

CAUSE

Old age orphan run

Radhamani.H & Ramya Nagaraj

YARF Volunteers
(Volunteers are our key part of survival)



ಯಾರು ವೃದ್ಧ ಅನಾಥರು ?

“ ಉತ್ತಮ ಹಾರೈಕೆ ಮತ್ತು ಉತ್ತಮ ಪ್ರಪಂಚ ”

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚುತಿರುವ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳನ್ನು ನೋಡುತ್ತಿದ್ದೇವೆ. ಇಂಥವರಿಗೆ ಸಂತೋಷವಾಗಿ ಜೀವನ ಸಾಗಿಸಲು ಆರ್ಥಿಕ ಸೌಲಭ್ಯ ಮತ್ತು ಮಾನವೀಯತೆಯ ಅವಶ್ಯಕತೆಯಿದೆ. ಕೆಲವು ಸಂಘ ಸಂಸ್ಥೆಗಳು ಆರ್ಥಿಕವಾಗಿ ಸಹಾಯ ಮಾಡುವುದರ ಜೊತೆಗೆ ಅವಶ್ಯಕತೆಯಿರುವ ವಸ್ತುಗಳನ್ನು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಒದಗಿಸುತ್ತಿದ್ದಾರೆ. ಆದರೆ ಅಂತಹ ಸಂಘ ಸಂಸ್ಥೆಗಳಿಂದ ಸಹಾಯ ಹೆಚ್ಚಾಗಿ ದೊರೆಯಬೇಕಾದರೆ ಸಂಘ ಸಂಸ್ಥೆಗಳು ಆರ್ಥಿಕವಾಗಿ ಪ್ರಬಲವಾಗ ಬೇಕು. ಉತ್ತಮ ಸಂಘಸಂಸ್ಥೆಗಳಿಗೆ ಸಹಾಯಕರಾಗಿ ನಿಂತು ಪ್ರೋತಾಹಿಸಬೇಕು. ಇದರಿಂದ ಅನಾಥರಿಗೆ ಮತ್ತು ವೃದ್ಧರಿಗೆ ಅವಶ್ಯಕವಾಗಿರುವಂಥ ವಸ್ತುಗಳನ್ನು ಒದಗಿಸಬಹುದು.


ವೃದ್ಧ ಅನಾಥರು ?

Old age orphan run

ಯುವಜನಾಂಗ ವಯಸ್ಸಾದ ತಂದೆ ತಾಯಿಯರನ್ನು ಸರಿಯಾಗಿ ಹಾರೈಕೆ ಮಾಡುತ್ತಿಲ್ಲ.ಅವರೊಡನೆ ಬೆರೆತು ಜೀವನ ನಡೆಸದೆ ವೃದ್ಧರನ್ನು ಒಂಟಿಮಾಡುತ್ತಾರೆ ಇದರಿಂದ ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ . ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಕುಟುಂಬದಿಂದ ಯಾವುದೇ ಸಹಾಯ ದೊರಕದಿದ್ದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸಂಪೂರ್ಣವಾಗಿ ಮನೋವ್ಯಥೆಗೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಕಾರಣ ನಮ್ಮ ಯುವಜನರಲ್ಲಿರುವ ತಂದೆ ತಾಯಿಯ ಬಗೆಗಿನ ತಾತ್ಸಾರ ಮನೋಭಾವ.

ವಯಸ್ಸಾದ ತಂದೆ ತಾಯಿಗಳಿಗೆ ಪ್ರೀತಿ, ಅನುಕಂಪದ ಜೊತೆ ಹಾರೈಕೆ ಮುಖ್ಯವಾಗಿ ಬೇಕು. ವೃದ್ಧರನ್ನು ಹಾರೈಕೆ ಮಾಡಿ ಅವರನ್ನು ರಕ್ಷಿಸುವುದರಿಂದ ಉತ್ತಮ ಸಮಾಜವನ್ನು ಕಟ್ಟುವುದರ ಜೊತೆ ಉತ್ತಮ ನಾಗರೀಕರಾಗಬಹುದು. ಅಂತಹ ಕೆಲಸವನ್ನು ಪ್ರತಿಯೊಂದು ಮನೆಯಲ್ಲಿರುವ ಯುವಜನಾಂಗ ಮಾಡಬೇಕಾಗಿದೆ. ಸಂಘ ಸಂಸ್ಥೆಗಳು ಸಹ ಹೆಚ್ಚು ಚಲನಶೀಲರಾಗಿ ಈ ಕೆಲಸಗಳನ್ನು ಮಾಡಬೇಕು.ಚಲನಶೀಲ ಸಂಘಸಂಸ್ಥೆಗಳನ್ನು ಗುರುತಿಸಿ ಪ್ರತಿಯೊಬ್ಬ ನಾಗರೀಕರು ಸಹಾಯಮಾಡುವುದರಿಂದ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಿ ಅವರನ್ನು ಸಂತೋಷದಿಂದ ಬದುಕುವಂತೆ ಮಾಡಬಹುದು. ಉತ್ತಮ ಪ್ರಪಂಚದ ನಿರ್ಮಾಣ ಮಾಡಬಹುದು.



ಅಂಕಿ ಅಂಶಗಳ ಪ್ರಕಾರ

Elder people population

ಭಾರತದಲ್ಲಿ ೨೦೧೧ರ ಜನಗಣತಿಯ ಪ್ರಕಾರ ಶೇಕಡ ೮ರಷ್ಟು ೬೦ ವರ್ಷಕ್ಕಿಂತ ಮೇಲ್ಪಟ್ಟ ಜನರಿದ್ದಾರೆ. ಇದನ್ನು ಗಮನಿಸಿದರೆ ೨೦೨೬ ರ ವೇಳೆಗೆ ಶೇಖಡ ೧೨.೫ ರಿಂದ ಶೇಖಡ 20 ರಷ್ಟು ವೃದ್ಧರ ಸಂಖ್ಯೆ ಹೆಚ್ಚಾದರೆ ಅವರ ಹಾರೈಕೆ ಮಾಡುವುದು ಸಹ ಒತ್ತಡದ ಪರಿಸ್ಥಿತಿಯಾಗುತ್ತದೆ.

೨೦೧೫-೧೬ ಐಸ್ಕೋನ್ ಸರ್ವೇ ಪ್ರಕಾರ ೬೦% ಹಿರಿಯ ನಾಗರೀಕರು ತಮ್ಮ ಕುಟುಂಬವರ್ಗದಿಂದ ಹಿಂಸೆಗೊಳಗಾಗುತ್ತಾರೆ.66% ಬಡತನ ರೇಖೆಗಿಂತ ಕೆಳಗಿರುವರು ಅಥವಾ ಕಡು ಬಡವರಾಗಿದ್ದರೆ ಮತ್ತು ೩೯% ಕುಟುಂಬದಿಂದ ವಂಚಿತರಾಗಿದ್ದಾರೆ ಅಥವಾ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಓಟದ ಉದ್ದೇಶವೇನು?

~ಬಡವರು,ರೋಗಸ್ತರು,ಕುಟುಂಬದಿಂದ ವಂಚಿತರಾದವರಿಗೆ ಪ್ರಕೃತಿ ವಿಕೋಪಕೊಳಗಾಗಿ ನಿರಾಶ್ರಿತರಾದವರಿಗೆ ವಸತಿ ಕಲ್ಪಿಸುವುದು.

~ಓಟದ ಮುಖ್ಯ ಗುರಿ ಇಂತಹ ಜನರಿಗೆ ಗೌರವಯುತ ಮತ್ತು ಆರೋಗ್ಯ ಪೂರ್ಣ ಜೀವನ ಕಲ್ಪಿಸುವುದು.

~ಸಮಸ್ಯೆಗಳಿಗೆ ಕಾರಣ ತಿಳಿದು ಅದನ್ನು ಬಗೆಹರಿಸುವುದರೊಂದಿಗೆ ಉತ್ತಮ ಗುಣಮಟ್ಟದ ಜೀವನ ನಡೆಸಲು ಸಹಕಾರಿಯಾಗುವುದು.


Elder people population

ಹಿರಿಯನಾಗರೀಕರಿಗಾಗಿ ಏಕೆ ಮ್ಯಾರಥಾನ್? ಯಾರೀ ಹಿರಿಯ ವಯಸ್ಸಿನ ಅನಾಥರೆಂದರೆ?


ಹಿರಿಯ ವಯಸ್ಸಿನ ಅನಾಥರು ಎಂದರೆ ವಯಸ್ಸಾದ,ಸಮುದಾಯದಲ್ಲಿದ್ದು, ಸಾಮಾಜಿಕವಾಗಿ, ದೈಹಿಕವಾಗಿ ವಂಚನೆಗೊಳಗಾದವರು,ಕುಟುಂಬದ ಸದಸ್ಯರ, ಹಾರೈಕೆ ಮಾಡುವವರಿಲ್ಲದವರು. ಸಾಮಾನ್ಯ ಮನುಷ್ಯನ ಮಾತಿನಲ್ಲಿ ಹೇಳುವುದಾದರೆ ಹಿರಿಯ ವಯಸ್ಸಿನ ಅನಾಥರು ಎಂದರೆ ಮುಪ್ಪಿನಲ್ಲಿ ವಯೋ ಸಹಜ ಸಮಸ್ಯೆಗಳನ್ನು ಆಲಿಸಲು,ಸಮಸ್ಯೆಗಳನ್ನು ನಿರ್ವಹಿಸಲು ಯಾರಿಗೆ ಕುಟುಂಬದ ಆಪ್ತರಿಲ್ಲವೂ ಅಥವಾ ಸ್ನೇಹಿತರಿಲ್ಲವೂ ಅಂಥವರು. ಸಹಾಯದ ಅವಶ್ಯಕತೆ ಏಕೆ?

  • ~ ಉತ್ತಮ ಆರೋಗ್ಯವನ್ನು ಒದಗಿಸಲು
  • ~ಸಹಾಯ ಗುಂಪನ್ನು ರಚಿಸಲು
  • ~ಹಿರಿಯ ನಾಗರೀಕರಿಗೆ ಸಹಾಯ ಮಾಡುವ ಸಂಘ ಸಂಸ್ಥೆಗಳನ್ನು ಹುಡುಕಲು
  • ~ಉತ್ತಮ ಆರೋಗ್ಯ ನಿರ್ವಹಣೆಯನ್ನು ತಿಳಿಸಿಕೊಡಲು ಹಾಗು ಅನಾರೋಗ್ಯದ ಸಮಸ್ಯೆ ಯನ್ನು ದೂರವಿಡಲು.
quote

ಸ್ಪರ್ಧಿಗಳು ಹೇಗೆ ಇದರಲ್ಲಿ ಭಾಗಿಯಾಗಿರುತ್ತಾರೆ?

  • ~ಆರ್ಥಿಕ ಸಹಾಯ.
  • ~ಸಾಮಾಜಿಕ ಕಳಕಳಿ ಹಾಗು ಉತ್ತೇಜನ.
  • ~ಸಂಘಗಳಿಗೆ ಸಹಾಯ ಮತ್ತು ಪ್ರೋತ್ಸಾಹ ನೀಡಲು.
  • ~ ಪ್ರೀತಿಯಿಂದ ಗೌರವಿಸುವುದು.
  • ಗುಂಪಿನ ಸದಸ್ಯರಾಗುವುದು.
quote

ಈ ಎಲ್ಲಾ ಸಹಾಯ ಮಾಡುವುದರಿಂದ ಬಾಡುವ ಗಿಡಕ್ಕೆ ನೀರೆರೆದಂತೆ.ನೊಂದ ಹೃದಯಗಳ ಮನಸ್ಸಿಗೆ ಸಾಂತ್ವಾನ ಹೇಳಿದಂತಾಗುತ್ತದೆ.ಇದರಿಂದ ಉತ್ತಮ ಪ್ರಪಂಚವನ್ನು ಸೃಷ್ಟಿಸಿದಂತಾಗುತ್ತದೆ

Our slots are full and participation registration is closed.

Sorry to those friends who missed..

List Price: Rs.999.0
Our Price: Rs.849.0
Buy from FlipKart
Copyrights © 2024, Yellow and Red -All rights are reserved  | Terms and Conditions | Sitemap | Contact Us
facebook twitter

Copyrights © 2013 - 2024, All Rights Reserved  

Colored By -
Top ↑